ಕೀರ್ತನೆ - 409     
 
ತಾ ಪಡೆದು ಬಂದುದಕುಪಾಯವೇನು | ಕೋಪದಲಿ ಶ್ರೀಪತಿಯ ಶಾಪಿಸಿದರೇನು ಅನ್ನವಸ್ತ್ರವಿಲ್ಲವೆಂದು ಅತಿ ಕ್ಷೇಶಪಟ್ಟರೇನು | ಧಾನ್ಯಧನಗಳ ಬೇಡಿ ಧರೆಗಿಳಿದರೇನು । ಎಣ್ಣಿಯನು ಪೂಸಿ ಹುಡಿಯೊಳಗೆ ಹೊರಳಿದರೇನು | ತನ್ನ ತಲೆ ಅಡಿಮಾಡಿ ತಪವ ಮಾಡಿದರೇನು ಸರಿಯ ಸುಜನರ ಕಂಡು ಕರುಬಿ ಕೊರಗಿದರೇನು | ಬರಿಮಾತುಗಳನಾಡಿ ಭ್ರಷ್ಟನಾದರೆ ಏನು ॥ ಇರುಳು ಹಗಲೂ ಹೋಗಿ ಆರ ಮೊರೆಯಿಟ್ಟರೇನು | ಅರಿಯದ ಮನುಜರಿಗೆ ಆಲ್ಪರಿದರೇನು ಹೋಗದೂರಿನ ದಾರಿ ಕೇಳಿ ಮಾಡುವದೇನು ! ಮೂಗನ ಕೂಡ ಏಕಾಂತವೇನು || ಯೋಗೀಶ ಪುರಂದರವಿಠಲನ ನೆನೆಯದವ | ತ್ಯಾಗಿಯಾದರೆ ಏನು ಭೋಗಿಯಾದರೆ ಏನು