ಕೀರ್ತನೆ - 406     
 
ಕಷ್ಟಪಟ್ಟರೂ ಇಲ್ಲ ಕಳವಳಿಸಿದರಿಲ್ಲ ಭ್ರಷ್ಟಮಾನವ ಹಣೆಯ ಬರಹವೆನ್ನದೆ ಇಲ್ಲ ಸಿರಿವಂತನ ಸ್ನೇಹಮಾಡಿ ನಡೆದರಿಲ್ಲ. ಪರಿಪರಿಯಲಿ ವಿದ್ಯೆ ಕಲಿತರಿಲ್ಲ ನರಿಯ ಬುದ್ಧಿಯಲಿ ನಡೆದುಕೊಂಡರು ಇಲ್ಲ ಅರಿಯದೆ ಹಲವ ಹಂಬಲಿಸಿದರಿಲ್ಲ ಕೊಂಡೆಗಾರಿಕೆಯನ್ನು ಹೇಳಿ ನಡೆದರಿಲ್ಲ ಕಂಡಕಂಡವರಿಗೆ ಕೈ ಮುಗಿದರಿಲ್ಲ ಗಂಡುಗತ್ತರಿಯನ್ನು ಕೊರಳಿಗಿಟ್ಟರು ಇಲ್ಲ ಚಂಡನಾದರೂ ಇಲ್ಲ ಪರಿಹಾಸ್ಯವಲ್ಲ ಕಟ್ಟಾಳು ಕಡು ಜಾಣನಾಗಿ ಪುಟ್ಟಿದರಿಲ್ಲ ಬೆಟ್ಟಗಳನು ಕಿತ್ತಿಟ್ಟರಿಲ್ಲ ಸೃಷ್ಟಿಯೊಳು ಪುರಂದರವಿಠಲರಾಯ ಕೊಟ್ಟವರಿಗೆ ಉಂಟು ಕೊಡದವರಿಗೆ ಇಲ್ಲ