ಒಂಬತ್ತು ಬಾಗಿಲೊಳು ಒಂದು ದೀಪವ ಹಚ್ಚಿ ।
ನಂಬಿಗಿಲ್ಲದೆ ಒಗತನ ಮಾಡಿದೆನೆ ಸೂವಕ್ಕ ಸುವ್ವ
ತನುವೆಂಬ ಕಲ್ಲಿಗೆ ಮನ ಧಾನ್ಯವನುತುಂಬಿ |
ಒನೆದೊನೆದು ಒಬ್ಬಳೆ ಬೀಸಿದೆನೆ
ಅಷ್ಟ ಮದಗಳೆಂಬ ಅಷ್ಟಧಾನ್ಯವ ತೆಗೆದು |
ಕುಟ್ಟಿ ಕುಟ್ಟಿ ಕಾಳು ಮಾಡಿದೆನೆ
ನಷ್ಟ ತರ್ಕವೆಂಬ ಕಟ್ಟಿಗೆ ಉರಿದು ನಾ |
ನಿಷ್ಠೆಯಿಂದನ್ನವ ಮಾಡಿದೆನೆ
ಅಷ್ಟರೊಳು ಗಂಡಬಂದ ಆಡುವ ಗಡಿಗೆಯ ಒಡೆದ 1
ಹುಟ್ಟು ಮುರಿದು ಮೂಲೆಗೆ ಹಾಕಿದನೆ
ಹುಟ್ಟಿನಲಿ ತಿರುಹುವ ಒಟ್ಟಿನಲಿ ಕುದಿಸುವ |
ಕಟ್ಟಂಬಲಿಯನೆತ್ತಿ ಕುಡಿಸಿದನೆ
ಉಡುವ ಸೀರೆಯ ಸೆಳೆದು ಗಿಡದ ತೊಪ್ಪಲ ಸುತ್ತಿ ।
ಕಡೆಗೆ ಬಾರದಹಾಗೆ ಮಾಡಿದನೆ
ಮಾಡಿದೆನೆ ಒಗೆತನ ನಂಬಿಗಿಲ್ಲದ ಮನೆಯೊಳು |
ಕೊಡಿದೆನೆ ಪುರಂದರವಿಠಲನ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ತತ್ತ್ವ ವಿವೇಚನೆ