ಇಲ್ಲಿಯೇ ಕುಳಿತಿದ್ದ ಭೂತವು ಒಂದು
ಹಲ್ಲಿಯು ನುಂತು ಹದಿನಾಲ್ಕು ಲೋಕವ
ಸೂಳೆಯ ಮನೆಯಲಿ ಇದೆಯೊಂದು ಕೋಳಿ |
ಕೋಳಿಯ ನಾಲಗೆ ಏಳು ತಾಳೆಯುದ್ಧ |
ಕೋಳಿ ನುಂಗಿತು ಏಳು ಕಾಳಿಂಗ ನಾಗನ ।
ಮೇಲೊಂದು ಬೇಡಿತು ಸಿಂಹದ ಮರಿಯ
ಕಾನನದೊಳಗೊಂದು ಇರುವದು ಕೋಣ |
ಕೋಣನ ಕೊರಳಿಗೆ ಮುನ್ನೂರು ಬಾವಿ ||
ಕೋಣ ನೀರಿಗೆ ಹೋಗಿ ಕ್ಷೋಣಿ ಕಪಿಯ ಕೊಂದು |
ಟೊಣ್ಣನ ಮನೆಯೊಳಗೌತನವಯ್ಯ
ವೃಕ್ಷದಮೇಲೊಂದು ಸೂಕ್ಷ್ಮದ ಪಕ್ಷಿ |
ಪಕ್ಷಿಭಕ್ಷಣವಾದ ಅಮೃತದ ಹಣ್ಣು |
ಪಕ್ಷಿ ನೋಡಲು ಬಂದ ರಾಕ್ಷಸ ಬ್ರಾಹ್ಮಣ |
ಶಿಕ್ಷೆಯ ಮಾಡಿದ ಪುರಂದರವಿಠಲ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ತತ್ತ್ವ ವಿವೇಚನೆ