ಕೀರ್ತನೆ - 401     
 
ಇಲ್ಲಿ ನೋಡಲು ರಾಮ ಅಲ್ಲಿ ನೋಡಲು ರಾಮ । ಎಲ್ಲೆಲ್ಲಿ ನೋಡಲು ರಾಮಚಂದ್ರನು ಮೂಲೋಕದಲ್ಲಿ ತ್ರೈಮೂರ್ತಿರೂಪಗಳಲ್ಲಿ ಎಲ್ಲೆಲ್ಲಿ ನೋಡಲು ಅಲ್ಲಲ್ಲಿ ರಾಮರೂಪ ರಾವಣನ ಮೂಲಬಲವ ಕಂಡು ಕಪಿಗಳು ಆವಾಗಲೆ ಹೊರಟೋಡುತಿರೆ ಈವಾಗ ನರನಾಗಿ ಇರಬಾರದೆಂದೆನುತ ದೇವ ರಾಮಚಂದ್ರ ಬಹುರೂಪ ತಾನಾದ ಅವನಿಗೆ ಇವ ರಾಮ ಇವನಿಗೆ ಅವ ರಾಮ ಬುವಿಯೊಳಗೆ ಬೇರೆ ರೂಪವುಂಟೆ ಅವನಿಯೊಳಿರುತಿಪ್ಪ ದುರುಳ ಜನರೆಲ್ಲ ಅವರವರೆ ಹೊಡೆದಾಡಿ ಹತವಾಗಿ ಹೋದರು ಹನುಮಂತಾದಿ ಸಾಧುಜನರು ಅಪ್ಪಿಕೊಂಡು ಕುಣಿದಾಡಿದರು ಅತಿ ಹರುಷದಲಿ ಕ್ಷಣದಲಿ ಪುರಂದರವಿಠಲರಾಯನು ಕೊನೆಗೆ ರಾಮಚಂದ್ರನೊಬ್ಬನಾಗಿ ನಿಂತ