ಆರೇನ ಮಾಡುವರು ಆರಿಂದಲೇನಹುದು
ಪೂರ್ವಜನ್ಮದ ಕರ್ಮ ವಿಧಿ ಬೆನ್ನಬಿಡದು
ಐದು ವರುಷದ ತರಳ ತಾನೆತ್ತ ತಪವೆತ್ತ ।
ಬೈದು ಮಲತಾಯಿ ಅಡವಿಗೆ ನೂಕಲು ||
ಸುಯ್ದು ಕೋಪಾಗ್ನಿಯಲಿ ಪೊರಮಟ್ಟು ಪೋಪಾಗ 1
ಐದೆ ಬಂಧುಗಳಿದ್ದು ಏನ ಮಾಡಿದರು
ನೃಪರೊಳಗೆ ಅತಿ ಶ್ರೇಷ್ಠ ಬಲವಂತ ರಘುರಾಮ ।
ಅಪರಿಮಿತ ಶೂರ ಲಕ್ಷ್ಮಣದೇವರು
ಚಪಲಾಕ್ಷಿ ಸೀತೆಯನು ಖಳನು ಕದ್ದೊಯ್ದಾಗ ।
ವಿಪರೀತ ವೀರರಿದ್ದೇನ ಮಾಡಿದರು ?
ಪಾಪಿ ದುಶ್ಯಾಸ ದ್ರೌಪದಿಯ ಸೀರೆಯ ಸೆಳೆದು |
ಕೋಪದಿಂ ಮಾನಭಂಗವ ಮಾಡಲು ॥
ಆಪತ್ತು ಬೆನ್ನಟ್ಟಿ ಹಾ ಕೃಷ್ಣ - ಎನುವಾಗ |
ಭೂಪತಿಗಳೈವರಿದ್ದೇನ ಮಾಡಿದರು ?
ರಣದೊಳಗೆ ಅಭಿಮನ್ಯು ಚಕ್ರವ್ಯೂಹವ ಪೊಕ್ಕು 1
ಸೆಣಸಿ ಷಡುರಥದೊಡನೆ ಹೊಯ್ದಾಡಲು ||
ಅಣಕವಿಲ್ಲದೆ ಕಾದಿ ಅಸುವಳಿದು ಪೋಪಾಗ.!
ತ್ರಿಣಯಸಖ ಪಾರ್ಥರಿದ್ದೇನ ಮಾಡಿದರು
ಬ್ರಹ್ಮಶಿರ ಕರಕಟ್ಟಿ ಶಿವನ ಪೀಡಿಸುತ್ತಿರಲು |
ಸುಮ್ಮನೇ ಜಗವನೆಲ್ಲವ ತಿರುಗಿದ ॥
ಬೊಮ್ಮಮೂರುತಿಯಾದ ಪುರಂದರವಿಠಲನೇ
ನಮ್ಮ ಅಳವಲ್ಲ ವಿಧಿಮೀರಿ ಬಾಳುವರೆ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ತತ್ತ್ವ ವಿವೇಚನೆ