ಕೀರ್ತನೆ - 394     
 
ಹೆಂಡಿರನಾಳುವಳೇ ಕನ್ನಿಕೆ | ಗಂಡನಿಲ್ಲದ ಹೆಂಗುಸಿ ಕನ್ನಿಕೆ ಅಂಥಿಂಥಿವಳೆಂದು ಅಳವಡಿಸಲು ಬೇಡ | ಇಂಥ ಸೊಬಗನಂತ ಏನೆಂಬೆನೊ 11 ಸಂತತಸುರ - ದನುಜರಿಗೆ ಪ್ರಪಂಚದಿ । ಪಂಕ್ತಿಯೊಳಮೃತವ ಬಡಿಸಿದಳು ಶಿಶುವು ಬೊಂಬೆಯ ತೋರ ಆಲದೆಲೆಯ ಮೇಲೆ | ಅಸುಮಯಜಲದಲಿ ಮಲಗಿ ಮೈಮರೆದಳು || ಬಸಗೆಯಾಗದ ಮುನ್ನ ಹೊಕ್ಕುಳ ಹೂವಿನಲಿ | ಬಸುರಲಿ ಬೊಮ್ಮನ ಪಡೆದಳೇ ಕನ್ನಿಕೆ ಬೇಗೆಗಣ್ಣವನಿಗೆ ಬಿಸಿಗೈ ತಾಗುವಾಗ | ಭೋಗದ ಸೊಗತೋರಿ ಬೂದಿಯ ಮಾಡಿ || ಭಾಗೀರಥಿಯ ಪಿತ ಬೇಲೂರ ಚೆನ್ನಿಗ । ಯೋಗಿ ಪುರಂದರವಿಠಲನೆಂಬ