ಕೀರ್ತನೆ - 390     
 
ವಿದುರನ ಭಾಗ್ಯವಿದು | ಪದುಮಜಾಂಡ ತಲೆದೂಗುತಲಿದೆಕೊ ಕುರುರಾಯನು ಖಳನನುಜನು ರವಿಜನು । ಗುರುಗಾಂಗೇಯರು ಎದುರಿರಲು || ಹರಿಸಿ ರಥವ ನಡು ಬೀದಿಯಲ್ಲಿ ಬಹ | ಹರಿಯ ತಾನು ಕಂಡನು ಹರುಷದಲಿ ದಾರಿಯಲಿ ಬಹ ಮುರವೈರಿಯ ಕಾಣುತ | ಹಾರುತ ಚೀರುತ ಕುಣಿಯುತಲಿ ॥ ವಾರಿಧಾರೆಯನು ನೇತ್ರದಿ ಸುರಿಸುತ । ಬಾರಿಬಾರಿಗೆ ಹಿಗ್ಗುವ ಸುಖದಿ ಆಟಕೆ ಲೋಕಗಳೆಲ್ಲಾ ಸೃಜಿಸುವ | ನಾಟಕಧರ ತನ್ನ ಲೀಲೆಯಲಿ ॥ ನೀಟಾದವರ ಮನೆಗಳ ಜರೆದು ! ಕುಟೀರದಲ್ಲಿ ಬಂದು ಹರಿ ಕುಳಿತ ಅಡಿಗಡಿಗೆ ತನ್ನ ತನುಮನ ಹರಹಿ । ಅಡಗೆಡೆಯುತ ಬಲು ಗದ್ಗದದಿ ।। ನುಡಿಗಳ ತೊದಲಿಸಿ ರೋಮವ ಪುಳಕಿಸಿ | ದುಡುದುಡು ಓಡುವ ದಶದಿಶೆಗೆ ಕಂಗಳುದಕದಿ ಪದಂಗಳ ತೊಳೆದು । ಗಂಧವ ಪೂಸಿದ ತನುಪೂರಿಸಿ 11 ಮಂಗಳ ಮಹಿಮನ ಚರಣಕೆರಗಿ ಪು- ಸ್ವಂಗಳಿಂದ ಪೂಜೆಯ ಮಾಡಿದನು ನೋಡಿದ ಭಕುತನ ಮನದ ಹವಣಿಕೆಯು ॥ ಪಾಡುವ ಪೊಗಳುವ ಹರುಷದಲಿ ॥ ನೀಡಿದ ಕರದಲಿ ಬಿಗಿದಪ್ಪಿದ ಕೊಂ ಡಾಡಿದ ಕರುಣದಿ ಜಗದೊಡೆಯ ಕ್ಷೀರವಾರಿಧಿಶಯನಗೆ ವಿದುರನು | ಕ್ಷೀರವನುಣಬಡಿಸಿದ ನೋಡಾ | ವಾರಿಜನಾಭನು ಕರಸಂಪುಟದಲಿ । ಆರೋಗಣಿಸಿದ ಘನತೆಯನು ಒಂದು ಕುಡಿತೆ ಪಾಲು ಹರಿ ತಾ ಸವಿದು । ಮುಂದಕೆ ನಡೆಸಿದ ಧರೆಮೇಲೆ ॥ ಇಂದಿರೆಯರಸನ ಚರಿತೆ ವಿಚಿತ್ರವು 1 ಚೆಂದದಿ ಹರಿದುದು ಬೀದಿಯಲಿ ಕರುಣಾಕರ ಸಿರಿಹರಿ ತನ್ನ ಭಕುತರ । ಪೊರೆವನು ಅನುದಿನ ಆಯತದಿ । ಸಿರಿಯ ಅರಸು ನಮ್ಮ ಪುರಂದರ ವಿಠಲನ | ಶರಣರು ಧನ್ಯರು ಧರೆಮೇಲೆ