ಯಮನೆಲ್ಲೊ ಕಾಣೆನೆಂದು ಹೇಳಬೇಡ |
ಯಮನೇ ಶ್ರೀರಾಮನು ಸಂದೇಹ ಬೇಡ
ನಂಬಿದ ವಿಭೀಷಣಗೆ ರಾಮನಾದ 1
ನಂಬದಿದ್ದ ರಾವಣಗೆ ಯಮನೇ ಆದ
ನಂಬಿದ ಅರ್ಜುನನಿಗೆ ಬಂಟನಾದ 1
ನಂಬಿದಿದ್ದ ಕೌರವನಿಗೆ ಕಂಟಕನಾದ
ನಂಬಿದ ಉಗ್ರಸೇನಗೆ ಮಿತ್ರನಾದ
ನಂಬದಿದ್ದ ಕಂಸನಿಗೆ ಶತ್ರುವಾದ
ನಂಬಿದ ಪ್ರಹ್ಲಾದಗೆ ಹರಿಯಾದ |
ನಂಬದಿದ್ದ ಹಿರಣ್ಯಕಗೆ ಅರಿಯಾದ
ನಂಬಿದವರ ಸಲಹುವ ನಮ್ಮ ದೊರೆಯು |
ಅಂಬುಜಾಕ್ಷ ಪುರಂದರವಿಠಲ ಹರಿಯು
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಪುರಾಣ ಕಥಾನಕಗಳು