ಕೀರ್ತನೆ - 384     
 
ಮಂದರಧರ ದೇವ ಮೊರೆಹೊಕ್ಕವರ ಕಾಯ್ವ ಮಂದಾಕಿನಿಯ ಪಿತ ಮಾವ ಕಂಸನ ಹೃತ । ಸುಂದರ ಶಶಿವದನ ರಂಗಯ್ಯ ಕಣ್ಣು ನೋಟದಿ ಚೆಲುವ, ಕಮಠರೂಪದಿ ನಲಿವ | ಹೆಣ್ಣ ಮೊರೆಯ ಕೇಳಿ ಹಿರಣ್ಯನುದರ ಸೀಳಿ ॥ ಮಣ್ಣು ಬೇಡಿ ಬೆಳೆದೆ ಕೃಷ್ಣಯ್ಯ | ಹೊನ್ನ ಕೊಡಲಿಯ ಪಿಡಿದು ಹತ್ತುಗ್ರೀವನ ಕಡಿದು | ಚಿಣ್ಣರ ಒಡಗೂಡಿ ಚಪಲೆಯರ ವ್ರತಗೆಡಿಸಿ । ಚೆನ್ನರಾವುತನಾದೆಯೊ – ರಂಗಯ್ಯ ಗೋಚರನಂದದಲಿ - ಗಿರಿಯ ತಾಳಿದೆ ಬೆನ್ನಿನಲಿ | ಭೂಚೋರನ ಕೊಂದು ಬಾಲ ಕರೆಯಲು ಬಂದು 1 ಯಾಚಕ ನೀನಾದೆ ರಂಗಯ್ಯ || ಸೂಚತನ ಸುತಗೊಲಿದು ಶರಧಿಯ ಕಟ್ಟಿ ಮೆರೆದೆ | ಕೀಚಕಹತಪೋಷ ಖೇಚರಪುರವಾಸ 1 ನೀಚಜನರ ತರಿದೆ ರಂಗಯ್ಯ ವನವನಲೆದು ಬಂದ ವನಿತೆರತ್ನವ ತಂದ 1 ಘನಕಂಭದಿಂದ ಬಂದು ಗರುವ ಮುರಿದು ಬಲಿಯ 1 ಜನನಿಯ ಶಿರವರಿದೆ ರಂಗಯ್ಯ । ಹನುಮವಂದಿತಪಾದ ಹರುಷ ಪಾಂಡವವರದ । ಮನಸಿಜವೈರಿಗೊಲಿದು ಮಹಾಕಲಿಕಿಯಾದೆ | ಘನಪುರಂದರ ವಿಠಲ ರಂಗಯ್ಯ