ಕೀರ್ತನೆ - 383     
 
ಭಯ ನಿವಾರಣವು ಶ್ರೀ ಹರಿಯ ನಾಮ | ಜಯಪಾಂಡುರಂಗವಿಠಲ ನಿನ್ನ ನಾಮ ಧಾರಿಣೀದೇವಿಗಾಧಾರವಾಗಿಹ ನಾಮ । ನಾರದರು ನಲಿನಲಿದು ನೆನೆವ ನಾಮ । ಘೋರಪಾತಕಿ ಅಜಾಮಿಳನ ಸಲಹಿದ ನಾಮ । ತಾರಕವು ಬ್ರಹ್ಮ - ಭವರಿಗೆ ನಿನ್ನ ನಾಮ ಮೊರೆಯಲಾಲಿಸಿ ಮುನ್ನ ಗಜವ ಸಲಹಿದ ನಾಮ| ಕರುಣಿದಿಂ ದ್ರೌಪದಿಯ ಕಾಯ್ದ ನಾಮ| ಮರುಗುತಿಹ ಧ್ರುವನ ಉನ್ನತನ ಮಾಡಿದ ನಾಮ | ಪರತತ್ತ್ವ ಇಹಕಲ್ಲವೇ ನಿನ್ನ ನಾಮ ಚರಣದಲಹಲೈಯನು ಸೆರೆಯ ಬಿಡಿಸಿದ ನಾಮ | ಕರುಣದಲಿ ಪ್ರಹ್ಲಾದನನು ಕಾಯ್ದ ನಾಮ ॥ ತೊರೆಯಲಕ್ರೂರನಿಗೆ ನಿಜವ ತೋರಿದ ನಾಮ | ಸ್ಮರಿಪ ಜನರಿಗೆ ಸಮಸ್ತವನಿತ್ತ ನಾಮ ಚಂದ್ರಶೇಖರ ಗಿರಿಜೆಗೊರೆದ ಸಿರಿಹರಿನಾಮ ॥ ಬಂದ ವಿಭೀಷಣನ ಪಾಲಿಸಿದ ನಾಮ । ಕಂದಮುಚುಕುಂದನಿಗೆ ಕಾಮಿತವನಿತ್ತ ನಾಮ । ಸಂದ ಪಾಂಡವಪಕ್ಷ ಪಾವನವು ನಾಮ ಅಖಿಳವೇದಪುರಾಣ ಅರಸಿಕಾಣದ ನಾಮ ॥ ಸಕಲ ಯೋಗಿಜನಕೆ ಸೌಖ್ಯ ನಾಮ ॥ ಪ್ರಕಟಿಸಲು ಜಗವ ಪಾವನವ ಮಾಡಿದ ನಾಮ । ರುಕುಮಿಣೀಯರಸ ವಿಠಲ ನಿನ್ನ ನಾಮ ಭಕ್ತಿಯಲಿ ನೆನೆವರನು ಎತ್ತಿ ಸಲಹುವ ನಾಮ । ಮುಕ್ತಿ ಮಾರ್ಗಕೆ ಯೋಗ್ಯ ಹರಿ ನಿನ್ನ ನಾಮ । ಎತ್ತರಕೆ ಏರಿಪುದು ಸ್ವಾಮಿ ನಿನ್ನಯ ನಾಮ । ಚಿತ್ತಜನ ಪತ್ರ ಶ್ರೀಹರಿಯ ನಾಮ ವಾರಿಜಾನನೆ ತುಳಸಿಗೊಲಿದ ಹರಿನಾಮ ಕಾ -| ವೇರಿ ಮಧ್ಯದಲ್ಲಿ ನೆಲಸಿದ ನಿನ್ನ ನಾಮ ಕ್ಷೀರಸಾಗರದಲ್ಲಿ ಶಯನವಾಗಿಹ ನಾಮ| ನಾರಾಯಣ ಕೃಷ್ಣ ಹರಿ ನಿನ್ನ ನಾಮ ಹೊಂದಿದ್ದ ಭಕ್ತವೃಂದವ ಸಲಹಿದಾ ನಾಮ ॥ ತಂದು ಅಮೃತವ ಸುರರಿಗೆರೆದ ನಾಮ ॥ ಅಂದಂಬರೀಷನನು ಕಾಯ್ದ ಶ್ರೀ ಹರಿನಾಮ । ತಂದೆ ಪುರಂದರವಿಠಲ ಹರಿ ನಿನ್ನ ನಾಮ