ಬಲಿಯ ದಾನವಬೇಡಿ | ಚೆಲುವಾಕಾರವಾಗಿ ।
ನೆಲನಾ ನೀರಡಿ ಮಾಡಿದಡಾ | ಲಲನೆ ತೊಡಿಯಾಲಿಟ್ಟು
ಶಿರ ವನೊರೆಸುತ್ತ | ಮೊಲೆಯಾನೂಡುವಾ ಪುಣ್ಯ ಹೇಗೆ
ಪಡೆದಾಳೋ । ಮಗಾನೆಂದು
ಮಗನೆಂದಾಡಿಸುವಾಳು | ಮೊಗಾನೋಡಿ ನಗುವಾಳು |
ಮಿಗೆ ಹರೂಷದಲಿ ಲೋಲಾಡುವಾಳೂ |
ಜಗಾದುದರನ್ನ ಮಗನೆಂದು ರಕ್ಷಿಸಿ |
ಬಿಗಿದಪ್ರೊ ಪುಣ್ಯ ಹೇಗೆ ಪಡದಳೊ
ಪಶೂಪಾಲೆಯರೂ | ಬ್ರಂಹ್ಮವನೂ ನೂರಮುನಿಗಳು |
ವಸುಧಯ ಮಲುಳಿದಾವರೆಲ್ಲಾರು | ಶಶಿಮೌಖಿಸಾವಿರಾ ।
ವರಹಾವಿತ್ತವಾನೆಂದೂ | ಕೊಸಾರಾನಿಡುವಾ ಪುಣ್ಯ
ಹೇಗೆ ಪಡದಾಳೊ
ಸಾಗರ ಸುತಿಯಾರು | ಭೋಗಿ ಶಯನನಾ ।
ಯೋಗನಿದ್ರೆಯೊಳಾದ್ಯ ದೇವನಾ ।
ಆಗಮಾ ಶ್ರುತಿಗಳು | ಆರಾರು ಕಾಣದ ವಸ್ತುವ ।
ತೂಗಿದಾಳೆ ಪುಂಣ್ಯ ಹೇಗೆ ಪಡದಳೋ
ಕಾಲಲಂದುಗೆ ಕಿಂಕಿಣಿ ಹೊನ್ನ ಕಿರುಗೆಜ್ಜೆ |
ಹಾರಾಸರದ ಕೊರಳಾ ಪದಕಾ । ಬಾಲದೊಡಿಗೆಸಮ್ಮ
ಬಾಲನಯತ್ತಿಕೊಂಡು | ಹಾಲಕುಡಿಸುವಾ ಪುಣ್ಯ
ಹೇಗೆ ಪಡದಳೊ
ತೋಳಂನಾಡೆಲೊ ಕೃಷ್ಣ ತೋಳಂನಾಡಿಸುತಾಲಿ |
ಭಾಮೆರುಕುಮಿಣಿ ಬಿಗಿದಪ್ಪುವ ।
ಭಾಮೆರುಕುಮಿಣಿ ಬಿಗಿದಪ್ಪುವಾ ಬಾಲನಾ ತೊಳಂನಾಡಿಸುವ ಪುಣ್ಯ
ಹೇಗೆ ಪಡದಾಳೊ
ಆನೆಯಾಡೆಲೊ ಕೃಷ್ಣ | ಆನೆಯಾಡೆನುತಲಿ
ರಾಯರಾಯರೂಗಾಗೆಲಿದಂತ | ರಾಯಾ ರಾಯಾ
ಕೂ ಗಾಲಾ ಪಟ್ಟದಾನೆಯಾಡಿಸುವ ಪುಣ್ಯ
ಹೇಗೆ ಪಡದಾಳೋ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಪುರಾಣ ಕಥಾನಕಗಳು