ಪವಡಿಸು ಪರಮಾತ್ಮನೆ ಸ್ವಾಮಿ
ಭವರೋಗ ವೈದ್ಯನೆ ಭಕ್ತರ ಪ್ರಿಯನೆ
ಕುಂದಣದಿ ರಚಿಸಿದ ಸೆಜ್ಜೆಯ ಮನೆಯಲಿ
ಇಂದ್ರನೀಲ ಮಣಿಮಂಟಪದಿ ॥
ಚಂದ್ರಕಾಂತಿಯ ಠಾಣದೀವಿಗೆ ಹೊಳೆಯಲು
ಸಿಂಧುಶಯನ ಆನಂದದಿಂದಲಿ
ತೂಗುಮಂಚದಿ ಹಂಸತೂಲದ ಹಾಸಿಗೆ
ನಾಗಸಂಪಿಗೆಯ ಹೂವಿನ ಒರಗು |
ಸಾಗರಸುತೆಯ ಸಮ್ಮೇಳದಲಿ ನಿಜ
ಭೋಗವ ಪಡುತ ಓಲಾಡುತಿರು
ಸದ್ದಡಗಿತು ಗಡಿಯಾರ ಸಾರಿತು ಬೀಗ
ಮುದ್ರೆಗಳಾಗಿವೆ ಬಾಗಿಲಿಗೆ |
ತಿದ್ದಿದ ಧವಳ ಶಂಖಗಳ ನಾದದಿಂದ
ಪದ್ಮನಾಭ ಶ್ರೀ ಪುರಂದರವಿಠಲ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಪುರಾಣ ಕಥಾನಕಗಳು