ನೋಡು ನೋಡು ನೋಡು ಕೃಷ್ಣಾ ।
ಹೇಗೆ ಮಾಡುತಾನೆ |
ಬೇಡಿಕೊಂಡರೆ ಬಾರ ಕೃಷ್ಣ ।
ಓಡಿ ಹೋಗುತಾನೆ
ಕಂಡಕಂಡವರ ಮೇಲೆ ಕಣ್ಣು ಹಾಕುತಾನೆ |
ಉಂಡು ಉಂಡು ಮುಸುಕನಿಟ್ಟು ಮಲಗಿಕೊಳ್ಳುತಾನೆ ॥
ಲಂಡತನವ ಮಾಡಿ ಮಾಡಿ ಮಣ್ಣ ಗೋರುತಾನೆ |
ಭಂಡು ಮಾಡಿ ಬಾಗಿಲೊಳಗೆ ಚೀರಿಕೊಳ್ಳುತಾನೆ
ಕರುಣವಿಲ್ಲದಲೆ ಬಂದು ಕಾಲಲೊದೆಯುತಾನೆ |
ಶರಣು ಹೊಕ್ಕರೆಯು ತಾನು ಕೊಡಲಿ ಮಸೆಯುತಾನೆ||
ಹರಿಯುವ ವಾನರರ ಕೂಡ ಹಾರಾಡುತಾನೆ |
ಸಿರಿಕೃಷ್ಣ ಹಾಲು ತುಪ್ಪ ಸೂರೆಮಾಡುತಾನೆ
ಬಾಲೆಯರಿಗೆ ವರವನಿತ್ತು ಪುರವ ಕೆಡಿಸುತ್ತಾನೆ |
ನೀಲಗುದುರೆಯನೇರಿ ಹಾರಿಸಾಡುತಾನೆ |
ಬಾಲಕರ ಕೂಡಿಕೊಂಡು ಕುಣಿದಾಡುತಾನೆ|
ಲೋಲ ಪುರಂದರ ವಿಠಲ ತಾನು ಕುಣಿಯುತಾನೆ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಪುರಾಣ ಕಥಾನಕಗಳು