ಕೀರ್ತನೆ - 377     
 
ನೆಲೆಸನ್ನ ಹೃದಯ ಮಂದಿರದಿ ಶ್ರೀ ಹರಿಯೆ ನೀ । ಸಲಿಸೆಮ್ಮ ಮನದಿಷ್ಟ ಅನುದಿನ ದಯದಿ ಸಿರಿವಿರಂಚಿ ಮರುತ್ಸುಪರ್ಣ ಪು - । ರಾರಿವಂದಿತ ಚರಣ ಸರಸಿಜ || ಪರಮಭಕ್ತ ಪ್ರಹ್ಲಾದ ನಾರದ । ವರಪರಾಶರ ಮುಖಸುಸನ್ನುತ (ಅ.ಪ) ನಾರುವಿ ಭಾರವ ಪೊರುವಿ-ಬಲು -| ಬೇರುಗಳನೆ ಕಿತ್ತು ಮೆಲುವಿ- ಕರಿ-| ವೈರಿ ರೂಪಗೊಂಡ ಗರುವಿ- ಬ್ರಹ್ಮ -| ಚಾರಿ ಖಳರ ಕತ್ತರಿಸುವಿ । ಬ್ರಹ್ಮ - || ವೀರದಶರಥಸುತ ಸುರಾರ್ಚಿತ । ಜಾರತನದಲಿ ವ್ರತವ ಕೆಡಿಸುತ । ತೋರಿ ಮೆರೆವನೆ ತರಳ ಬಲು ಗಂ - 1 ಭೀರ ಕುದುರೆಯನೇರಿ ಮೆರೆವನೆ ಅನಿಮಿಷ ಮಂದರೋದ್ಧರಣ-ನೀನಾ-| ವನಗಪಂಚಾನನವದನ - ವಾ 1 ಮನ ದಾನವರ ಕೊಯ್ದ ಕದನ - ಹೀನ - 1 ದನುಜರಾವಣ ಸಂಹರಣ ॥ ಧೇನುಕಾಸುರ ಶಕಟಮರ್ದನ | ಜ್ಞಾನದಾನ ವಿಡಂಬನಾನಕ | ಭಾನುಮಸ್ತಕ ನೀಲವರಕರ । ದೀನಜನಸಂತ್ರಾಣ ನಿಪುಣನೆ ಮಚ್ಛಕಚ್ಛಪ ಸ್ವಚ್ಛಕಿರನೆ-ಬಲು-| ಅಚ್ಚಶಿಶುಮೊರೆ ಕೇಳಿದವನೆ|| ಸ್ವೇಚ್ಛೆಯ ವಟು ಪರಶುಕರನೆ-ರಾಮ-| ವತ್ಸಾಸುರನ ವಧಿಸಿದವನೆ ॥ ತುಚ್ಛ ಜನರಿಗೆ ಕಪಟಕಾರಣ | ಹೆಚ್ಚಿನಶ್ವದ ಮೇಲೆ ಹೊಳೆವನೆ । ಮೆಚ್ಚಿ ಪುರಂದರ ವಿಠಲನ ಪರ - | ಮಾಚ್ಯುತದ ಪದವೀವ ದೇವನೆ