ಕೀರ್ತನೆ - 373     
 
ನರಸಿಂಹ ಮಂತ್ರ ಒಂದೇ ಸಾಕು -ಮಹಾ-| ದುರಿತಕೋಟಿಗಳ ಸಂಹರಿಸಿ ಭಾಗ್ಯವನೀವ ಹಸುಳೆ ಪ್ರಹ್ಲಾದನ ತಲೆಗಾಯ್ದುದೀ ಮಂತ್ರ | ಅಸುರನೊಡಲ ಬಗೆದ ದಿವ್ಯಮಂತ್ರ ॥ ವಸುಧೆಯೊಳು ದಾನವರ ಅಸುವ ಹೀರಿದ ಮಂತ್ರ | ಪಶುಪತಿಗೆ ಪ್ರಿಯವಾದ ಮೂಲಮಂತ್ರ ದಿಟ್ಟ ಧ್ರುವರಾಯಗೆ ಪಟ್ಟಗಟ್ಟಿದ ಮಂತ್ರ । ಶಿಷ್ಟ ವಿಭೀಷಣನ ಪೊರೆದ ಮಂತ್ರ ॥ ತುಟ್ಟತುದಿಯೊಳಜಾಮಿಳನ ಸಲಹಿದ ಮಂತ್ರ | ಮುಟ್ಟಿಭಜಿಪರಿಗಿದು ಮೋಕ್ಷಮಂತ್ರ ಹಿಂಡು ಭೂತವ ಕಡಿದು ತುಂಡು ಮಾಡುವ ಮಂತ್ರ | ಕೊಂಡಾಡೆ ಲೋಕಕುದ್ದಂಡ ಮಂತ್ರ || ಗಂಡುಗಲಿ ಪ್ರಚಂಡ ಹಿಂಡುದಾನವರ | ಗಂಡ ಪುರಂದರವಿಠಲನ ಮಹಾಮಂತ್ರ