ಒಂದೇ ನಾಮದೊಳಡಗಿದುವೊ ಆ
ನಂದದಿಂದುಸುರುವ ಅಖಿಳ ವೇದಗಳು
ಒಂದೇ ನಾಮವು ಪ್ರಹ್ಲಾದನ ಕಾಯ್ತು - ಮ
ತ್ತೊಂದೆ ನಾಮವೆ ಅಜಮಿಳನ ಸಲಹಿತು ॥
ತಂದೆ ತಾಯಿಯ ಬಿಟ್ಟ ಕಂದ ಧ್ರುವರಾಯಗಾ
ನಂದಪದವನಿತ್ತ ಅದ್ಭುತಗುಣವೆಲ್ಲ
ಮಚ್ಛ್ಯಾದ್ಯಾನಂತಾವತಾರ ಅಷ್ಟಾದಶ
ಸ್ವಚ್ಛ ಪುರಾಣಗಳಮೃತದ ಸಾರ ।।
ಕಚ್ಛಪನಾಗಿ ತ್ರೈಜಗಕೆ ಆಧಾರ ತ
ನ್ನಿಚ್ಛೆಯಿಂದಲಿ ತಾನು ಮಾಳ್ಪ ವ್ಯಾಪಾರ
ಒಬ್ಬರೀತಗೆ ಸಮರಿಲ್ಲ ತ -
ನ್ನಬ್ಬರದಿಂದಲಿ ಸಲಹುವನೆಲ್ಲ ||
ಕಬ್ಬುಬಿಲ್ಲನ ಪಿತ ಪುರಂದರ ವಿಠಲ ವೈ-
ದರ್ಭಿಯ ರಮಣನ ವರಸುಗುಣಗಳೆಲ್ಲ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಪುರಾಣ ಕಥಾನಕಗಳು