ಏನಯ್ಯ ನಿನ್ನ ಸಂಗದ ಪರಿ
ಮಾನಿನಿಯ ಮರುಳು ಮಾಡಿ ನೋಡಿದವಗೆ
ಶಿರವ ತೂಗುವಳು, ಚಿತ್ರದ ಪ್ರತಿಮೆಯಂತಿಹಳು |
ಕರವ ಗಲ್ಲದೊಳಿಟ್ಟು ಕಡುಸುಯ್ವಳು ||
ಇರು ಇರುತಲೊಮ್ಮೊಮ್ಮೆ ಎದುರೆದ್ದು ನೋಡುವಳು |
ಬರವ ಕಾಣದೆ ಕಂದಿ ಕುಂದಿ ಬಡವಾದಳೈ
ಕಂಬನಿಯ ತುಂಬುವಳು ಕರೆವಳು ಪೆಸರ್ಗೊಂಡು |
ಹಂಬಲಿಸುವಳು ಕಂಡ ಕಾಂತೆಯರೊಳು ||
ಬೆಂಬಿಡದೆ ಜಡೆ ಮುಡಿಯ ತೊಡಿಗೆ ಬೀಸಾಡುವಳು |
ಬಿಂಬವರಿತು ಪೊಗಳುವಳು ನಿನ್ನ ಗುಣಗಣವ
ಇನಿತರೊಳೇನಹುದೊ, ನಿನ್ನ ಮೇಲಣ ಸ್ನೇಹ |
ಘನತಾಪದಿಂದ ಗೋಚರವಾಗಿದೆ ||
ಅನುತಾಪದಿಂದ ಸಲೆ ಬಳಲಿದ ಮಾನಿನಿಯ |
ವನಜಾಕ್ಷ ಪುರಂದರ ವಿಠಲ ಬಂದು ಸಂತಯಿಸೊ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಪುರಾಣ ಕಥಾನಕಗಳು