ಕೀರ್ತನೆ - 343     
 
ಸಲ್ಲದೋ ಕೃಷ್ಣ ಸಲ್ಲದೋ ಸಿರಿ ವಲ್ಲಭ ಇದ ನೋಡು ಪಾಲಿಸಬೇಕೋ ಬಿತ್ತಿ ಬೆಳೆಸಿ ತಲೆಯೆತ್ತಿದ ಪೈರನು ಮತ್ತೆ ತುರುವಿಂಡನು ಬಿಟ್ಟು ಮೆಲ್ಲಿಸುವುದು ಸಾವಿರ ಹೊನ್ನಿಕ್ಕಿ ಸದನವ ಸಾಧಿಸಿ ಪಾವಕನುರಿಗೆ ನೀನೊಪ್ಪಿಸಿ ಕೊಡುವುದು ಕುಶಲದಿ ಬಣ್ಣಿಸಿ ಬರೆದು ಚಿತ್ತಾರವ ಮಸಿ ಮಣ್ಣ ಮಾಡಿ ನೀ ಕೆಡಿಸುವುದು ಬಲುಕಾಲ ಮುದ್ದಿಸಿ ಕಲಿಸಿ ಮಾತುಗಳನು ಗಿಳಿಯ ಸಾಕಿ ಬಾವುಗಗೆ ಒಪ್ಪಿಸುವುದು ಕರುಣಿಸು ಸಿರಿ ಪುರಂದರ ವಿಠಲ ನಮ್ಮ ಹಿರಿದು ಮಾಡಿ ಮತ್ತೆ ಕಿರಿದು ಮಾಡುವುದು