ಸಜ್ಜನರ ಸಂಗ ನಮಗೆಂದಿಗಾಗುವುದೊ ।
ದುರ್ಜನರ ಸಂಗದಿಂದಲಿ ನೊಂದೆ ಹರಿಯ
ವಾಕು ವಾಕಿಗೆ ಡೊಂಕನೆಣಿಸುವರು ಮತ್ತೆ |
ಪೋಕರಾಡಿದ ಮಾತು ನಿಜವೆಂಬರು ||
ವಾಕ್‌ಶೂಲಗಳಿಂದ ನೆಡುವರುಪರರನೀ ।
ಪೋಕುಮಾನವರಿಂದ ನೊಂದೆ ಹರಿಯೆ
ತಾವೆ ತಮ್ಮನ್ನು ಕೊಂಡಾಡಿಕೊಳ್ಳುವರು |
ನ್ಯಾಯವಿಲ್ಲದೆ ನುಡಿವರು ಪರರ ॥
ಭಾವಿಸಲರಿಯರು ಗುರುಹಿರಿಯರನಿಂಥ ।
ಹೇಯ ಮನುಜರಿಂದ ನೊಂದ ಹರಿಯೆ
ಬಡಜನರನು ಕೊಂದು ಅಡಗಿಸಿಕೊಂಬರು | -
ಬಿಡಲೊಲ್ಲರು ಹಿಡಿದನ್ಯಾಯವ ॥
ನುಡಿದು ಕೇಡನು ಒಡನೆ ತಪ್ಪಿಸಿಕೊಂಬಂಥ
ಕಡು ಮೂರ್ಖರಿಂದ ನಾ ನೊಂದೆನು ಹರಿಯೆ
ತೊತ್ತಿನೊಡನೆ ತನ್ನ ಸ್ನೇಹ ಸರಸ ಮಾತು |
ತೆತ್ತಿಗರೊಡನೆ ಪಂಥವ ನುಡಿವರು ।।
ಸತ್ತಬಳಿಕ ಸೃಷ್ಟಿ ಸಟೆಯೆಂಬರು ಇಂಥ |
ಮತ್ತ ಮನುಜರಿಂದ ನೊಂದೆ ಶ್ರೀಹರಿಯೆ
ಇಷ್ಟುದಿನವು ನಿನ್ನ ನೆನೆಯದ ಕಾರಣ |
ಕಷ್ಟಪಡುವ ಕೈ ಮೇಲಾಗಿ ||
ಸೃಷ್ಟಿಗೊಡೆಯ ಶ್ರೀ ಪುರಂದರವಿಠಲನೆ ।
ಮುಟ್ಟಿ ಭಜಿಸಬೇಕು ದೃಷ್ಟಮನವು ನಿನ್ನ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ