ಶ್ರೀನಿವಾಸಾ ನೀನೇ ಪಾಲಿಸೋ ಶ್ರಿತಜನಪಾಲ
ಗಾನಲೋಲ ಶ್ರೀ ಮುಕುಂದನೇ
ಧ್ಯಾನಮಾಳ್ವ ಸಜ್ಜನರ ಮಾನದಿಂ ಪರಿಪಾಲಿಸುವ
ವೇಣು ಗೋಪಾಲ ಗೋವಿಂದ ವೇದವೇದ್ಯ ನಿತ್ಯಾನಂದ
ಎಂದಿಗೆ ನಿನ್ನ ಪದಾಬ್ಜವ ಪೊಂದುವ ಸುಖ
ಎಂದಿಗೆ ಲಭ್ಯವೋ ಮಾಧವಾ ॥
ಅಂಧಕಾರಣ್ಯದಲ್ಲಿ ನೊಂದು ತತ್ತಳಿಸುತಿಹ
ಅಂದದಿಂದ ಈ ಭವದಿ ನಿಂದು ನೊಂದೆನೋ ಮುಕುಂದ
ಎಷ್ಟುದಿನ ಕಷ್ಟಪಡುವುದೋ ಯಶೋದೆಯ ಕಂದ
ದೃಷ್ಟಿಯಿಂದ ನೋಡಲಾಗದೆ ॥
ಮುಟ್ಟಿ ಭಜಿಸುವನಲ್ಲ ಕೆಟ್ಟ ನರಜನ್ಮದವನು
ದುಷ್ಟಕಾರ್ಯ ಮಾಡಿದರು ಇಷ್ಟನಾಗಿ ಕೈಯ ಹಿಡಿದು
ಅನುದಿನ ಅನೇಕ ರೋಗಗಳ ಅನುಭವಿಸಿದೆನೊ
ಘನಮಹಿಮ ನೀನೆ ಬಲ್ಲೆಯೋ ॥
ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹುವ
ಹನುಮದೀಶ ಪುರಂದರ ವಿಠಲ ನೀ ಎನಗೆ ಒಲಿದು
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ