ವೇಣುನಾದ ಬಾರೊ, ವೆಂಕಟರಮಣನೆ ಬಾರೊ |
ಬಾಣನ ಭಂಜಿಸಿದಂಥ ಭಾವಜನಯ್ಯನೆ ಬಾರೊ
ಪೂತನಿಯ ಮೊಲೆಯುಂಡ ನವ-|
ನೀತ ಚೋರನೆ ಬಾರೊ ||
ದೈತ್ಯರಾವಣನ ಸಂಹರಿಸಿದ |
ಸೀತಾನಾಯಕ ಬಾರೊ
ಹಲ್ಲು ಮುರಿದು ಮಲ್ಲರ ಗೆದ್ದ |
ಫುಲ್ಲನಾಭನೆ ಬಾರೊ 11
ಗೊಲ್ಲತಿಯರೊಡನೆ ನಲಿವ |
ಚೆಲ್ವ ಮೂರುತಿ ಬಾರೊ
ಮಂದಾರವನೆತ್ತಿದಂಥ |
ಇಂದಿರಾ ರಮಣನೆ ಬಾರೊ ||
ಕುಂದದೆ ಗೋವುಗಳ ಕಾಯ್ದ |
ನಂದನಂದನನೆ ಬಾರೋ
ನಾರಿಯರ ಮನೆಗೆ ಪೋಪ|1
ವಾರಿಜಾಕ್ಷನೆ ಬಾರೋ ||
ಈರೇಳು ಭುವನವ ಕಾಯ್ದ |
ಮಾರನಯ್ಯನೆ ಬಾರೊ
ಶೇಷಶಯನ ಮೂರುತಿಯಾದ ।
ವಾಸುದೇವನೆ ಬಾರೊ ||
ದಾಸರೊಳು ವಾಸವಾದ ।
ಶ್ರೀಶ ಪುರಂದರ ವಿಠಲ ಬಾರೊ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ