ಲಕ್ಷ್ಮೀಕಾಂತ ಬಾರೋ ಶುಭ ಲಕ್ಷಣವಂತ ಬಾರೋ
ಪಕ್ಷಿವಾಹನಾ ಬಾರೋ ಪಾವನ ಮೂರ್ತಿ ಬಾರೋ
ಆದಿಮೂಲ ವಿಗ್ರಹ ವಿನೋದಿ ನೀನೆ ಬಾರೋ
ಸಾಧುಸಜ್ಜನ ಸತ್ಯಯೋನಿ ದಾನಿ ನೀನೆ ಬಾರೋ
ಗಾಡಿಕಾರ ಕೃಷ್ಣ ನಿನ್ನ ಬೇಡಿಕೊಂಬೆ ಬಾರೋ
ರೂಢಿ ಮಾತನಾಡಿ ಸರ್ವ ರೂಢಿಗೊಡೆಯ ಬಾರೋ
ನಿನ್ನ ಪಾದಂಗಳ ನಾನು ಬಣ್ಣಿಸಿ ಕರೆವೆನು ಬಾರೋ
ಪನ್ನಂಗ ಶಯನ ಸಿರಿ ಪುರಂದರ ವಿಠಲಬಾರೋ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ