ರಾಮಕೃಷ್ಣರು ಮನೆಗೆ ಬಂದರು ಬಾಗಿಲ ತೆರೆಯಿರೊ
ಕಾಮಧೇನು ಬಂದಂತಾಯಿತು ಸುಖವ ಸುರಿಯಿರೊ
ಮಕರಕುಂಡಲ ನೀಲಮುತ್ತಿನ ಚೌಕಳಿ ಇಡುತಲಿ |
ಸುಕುಮಾರ ಸುಂದರವಾದ ಉಡುಗೆಯುಡುತಲಿ ॥
ಮುಖದ ಕಮಲ ಮುಗುಳನಗೆಯ ಸುಖವ ಕೊಡುತಲಿ |
ಕಂಕಣ ಹಾರ ತೋಳಬಂದಿ ತೊಡಿಗೆ ತೊಡುತಲಿ
ಚೆಂಡು ಬೊಗರಿ ಚಿಣ್ಣಿಕೋಲು ಗಜುಗವಾಡುತ |
ದುಂಡುಮಲ್ಲಿಗೆ ತುಂಬಿ ಕೊಳಲನೂದಿ ಪಾಡುತ ॥
ಮಿಂಡೆವೆಂಗಳ ಮುದ್ದುಮೊಗದ ಸೊಗವ ನೋಡುತ ।
ಭಂಡುಮಾಡಿ ಭಾಮೆಯರೊಡನೆ ಸರಸವಾಡುತ
ಪೊಕ್ಕುಳಲ್ಲಿ ಅಜನ ಪಡೆದ ದೇವದೇವನು |
ಚಿಕ್ಕ ಉಂಗುಟದಿ ಗಂಗೆಯ ಪಡೆದನಾತನು ||
ಮಕ್ಕಳ ಮಾಣಿಕ್ಯ ಪುರಂದರವಿಠಲ ರಾಯನು |
ಭಕ್ತ ಜನರಿಗೊಲಿದ ನಿವನು ಮುಕ್ತಿದಾತನು
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ