ರಕ್ಷಿಸೋ ಲೋಕನಾಯಕನೆ ನೀ ಎನ್ನ
ರಕ್ಷಿಸೋ ಲೋಕನಾಯಕನೇ
ಎಷ್ಟೆಷ್ಟು ಜನ್ಮ ಕಳೆದೆನೋ ಇ
ನ್ನೆಷ್ಟೆಷ್ಟು ಜನ್ಮ ಪಡೆವೆನೋ ||
ಕಷ್ಟವ ಪಡಲಾರೆ ಕೃಷ್ಣ ಕೃಪೆಯನಿಟ್ಟು
ಇಷ್ಟವ ಪಾಲಿಸು ಇಭರಾಜವರದನೆ
ಬಾಲತನದಿ ಬಹು ಬೆಂದೆನೋ ನಾನಾ
ಲೀಲೆಯಿಂದಲಿ ಕಾಲ ಕಳೆದೆನೋ ||
ಲೋಲಲೋಚನ ಎನ್ನ ಮೊರೆಯ ಕೇಳುತ ಬೇಗ
ಜಾಲವ ಮಾಡದೆ ಪಾಲಿಸೈ ನರಹರಿ
ಮುದುಕನಾಗಿ ಚಿಂತೆಪಡುವೆನೋ ನಾ
ಕದಡು ದುಃಖವ ಪಡಲಾರೆನೋ ॥
ಸದರವಲ್ಲವು ಶ್ರೀ ಪುರಂದರ ವಿಠಲ
ಮುದದಿಂದ ರಕ್ಷಿಸೊ ಖಗರಾಜಗಮನ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ