ಯಾಕೆ ಕಡೆಗಣ್ಣಿಂದ ನೋಡುವೆ-ಕೃಷ್ಣ
ನೀ ಕರುಣಾಕರನಲ್ಲವೆ?
ಭಕ್ತವತ್ಸಲ ನೀನಲ್ಲವೆ ಕೃಷ್ಣ ಚಿತ್ತಸುಖದಾತ ನೀನಲ್ಲವೆ?
ಅತ್ಯಂತ ಅಪರಾಧಿ ನಾನಾದಡೇನಯ್ಯ
ಇತ್ತಿತ್ತ ಬಾ ಎನ್ನಬಾರದೆ ರಂಗ
ಇಂದಿರೆಯರಸ ನೀನಲ್ಲವೆ ಬಹು ಸೌಂದರ್ಯನಿಧಿ ನೀನಲ್ಲವೆ?
ಮಂದಮತಿ ನಾನಾದಡೇನು ಕೃಪಾ
ಸಿಂಧು ನೀ ರಕ್ಷಿಸಬಾರದೆ ರಂಗ
ದೋಷಿಯು ನಾನಾದಡೇನಯ್ಯ ಸರ್ವ ದೋಷರಹಿತ ನೀನಲ್ಲವೆ?
ಗಾಸಿಯೇತಕೆ ನಿನ್ನ ನಂಬಿದೆ ಸಲಹಯ್ಯ
ಶೇಷಶಾಯಿ ಶ್ರೀ ಪುರಂದರ ವಿಠಲ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ