ಕೀರ್ತನೆ - 325     
 
ಮೂರುತಿಯನೆ ನಿಲ್ಲಿಸೋ ಮಾಧವ ನಿನ್ನ ಎಳೆತುಳಸಿಯ ವನಮಾಲೆಯು ಕೊರಳೊಳು ಹೊಳೆವ ಪೀತಾಂಬರದುಡೆಯಲೊಪ್ಪುವ ನಿನ್ನ ಮುತ್ತಿನ ಹಾರ ನವರತ್ನದುಂಗುರ ಬೆರಳ ಮತ್ತೆ ಶ್ರೀಲಕುಮಿಯ ಉರದೊಲೊಪ್ಪುವ ನಿನ್ನ ಭಕ್ತರ ಕಾಮಧೇನು ಕಲ್ಪತರುವೆಂಬ ಭಕ್ತವತ್ಸಲ ಪುರಂದರವಿಠಲನೆ ನಿನ್ನ