ಕೀರ್ತನೆ - 322     
 
ಮನವೆನ್ನ ಮಾತ ಕೇಳದು - ಮಂದಜ್ಞಾನದಿ । ತನುವಿನಾಸೆಯ ಬಿಡಲೊಲ್ಲದು ವನಜನಾಭನೆ ನಿನ್ನ ನಾಮ ಸಾಸಿರವ । ನೆನೆಯದೆ ಕಂಡಕಡೆಗೆ ಎರಗುತಲಿದೆ ದೇಹ ಸಂಬಂಧಿಗಳಾದವರೈವರು । ಮೋಹಪಾಶದಿ ಕಟ್ಟಿ ಬಿಗಿದಿಹರೈ ॥ ಕಾಯ ಅನಿತ್ಯವೆಂಬುದನರಿಯದೆ । ಮಾಯಾ ಪ್ರಪಂಚದಿಂದಲಿ ಬದ್ಧನಾಗಿಹೆ ಸಾಧುಸಜ್ಜನರ ಸಂಗವ ಮಾಡಿ ಪರಗತಿ-| ಗಾಧಾರವನು ಮಾಡಲೊಲ್ಲದಯ್ಯ ॥ ಕ್ರೋಧ ಕುಹಕ ದುಷ್ಟರೊಡನಾಡಿ ಕಾಲನ ॥ ಬಾಧೆಗೆ ಒಳಗಾಗುವಂತೆ ಮಾಡುತಲಿದೆ ಮದಗಜ ಮೈಯ ಮರೆತು ಮುಂದುಗಾಣದೆ | ಕದುವಿನೊಳಗೆ ಬಿದ್ದಂತಾದೆನಯ್ಯ | ಹೃದಯ ಕಮಲದಲಿ ನಿಂತು ರಕ್ಷಿಸೋ ಎನ್ನ । ಪದುಮಾಕ್ಷ ವರದ ಶ್ರೀ ಪುರಂದರ ವಿಠಲ