ಕೀರ್ತನೆ - 321     
 
ಮಂದಮತಿಯೊ ನಾನು ಮದನಜನಕನು ನೀನು ಕುಂದುಗಳನೆಣಿಸದಲೆ ದಯಮಾಡಿ ಸಲಹೋ ಪಾಪಕರ್ತನು ನಾನು ಪಾಪನಾಶಕ ನೀನು ಕೋಪ ಮದ ಮತ್ಸರದಿ ಸುಳಿವೆ ನಾನು || ತಾಪವನು ತರಿದು ನಿರ್ಭಯವ ಮಾಡುವೆ ನೀನು ರೂಪಛಾಯಕೆ ಮರುಳುಗೊಂಬೆನೈ ನಾನು ಶರಣ ಶಿಕ್ಷಕ ನೀನು ಪರಮ ಪಾತಕಿ ನಾನು ದುರಿತ ಪರ‍್ವತವ ಪರಿಹರಿಪೆ ನೀನು ॥ ಮರುಳುಗೊಂಬನು ನಾನು ಅರಿತು ರಕ್ಷಿಪೆ ನೀನು ಗರುವಮತಿಯೈ ನಾನಗಮ್ಯ ನೀನು ಮಂದಭಾಗ್ಯನು ನಾನು ಇಂದಿರಾಪತಿ ನೀನು ಹಿಂದು ಮುಂದಿನ ಸುದ್ದಿ ಅರಿಯದವ ನಾನು || ತಂದೆ ಶ್ರೀ ಪುರಂದರವಿಠಲ ರಾಯನೆ ದೇವ ಎಂದೆಂದು ಭಕ್ತರನು ಸಲಹುವೆಯೋ ನೀನು