ಬಿನ್ನಹಕೆ ಬಾಯಿಲ್ಲ ಎನಗೆ ಅದರಿಂದ |
ನಿನ್ನ ಮರೆದೆನೊ ಸ್ವಾಮಿ ಎನ್ನ ಕಾಯಯ್ಯ
ಅನ್ನಮದ ಅರ್ಥಮದ ಅಖಿಳ ವೈಭವದ ಮದ |
ಮುನ್ನ ಪ್ರಾಯದ ಮದವು ರೂಪ ಮದವು ।।
ತನ್ನ ಸತ್ವದ ಮದ ಧರಿತ್ರಿ ವಶವಾದ ಮದ ।
ಇನ್ನು ಎನಗಿದಿರಿಲ್ಲವೆಂಬ ಮದದಿ
ಶಶಿವದನೆಯರ ಮೋಹ ಜನನಿ ಜನಕರ ಮೋಹ |
ರಸಿಕ ಭ್ರಾಂತಿಯ ಮೋಹ ರಾಜಮನ್ನಣೆ ಮೋಹ ||
ಪಶು ಮೋಹ ಶಿಶುಮೋಹ ಬಂಧುವರ್ಗದ ಮೋಹ |
ಹಸನುಳ್ಳ ವಸ್ತ್ರ ಆಭರಣಗಳ ಮದದಿ
ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ |
ಅಷ್ಟು ದೊರಕಿದರೆ ಮತ್ತಷ್ಟರಾಸೆ ॥
ಕಷ್ಟ ಜೀವನದಾಸೆ ಕಾಣಾಚಿ ಕೊಂಬಾಸೆ
ನಷ್ಟ ಜೀವನ ಬಿಡಿಸೊ ಪುರಂದರ ವಿಠಲ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ