ಬಿಡೆ ನಿನ್ನ ಪಾದವ ಬಿಂಕವಿದೇಕೋ
ಕೊಡುವುದೊ ಅಭೀಷ್ಟವ ಕೋಪವಿದೇಕೋ
ನೀರೊಳು ಪೊಕ್ಕರು ನಿನ್ನನು ಬಿಡೆ ಬೆನ್ನ
ಭಾರವ ಪೊತ್ತಿಹೆನೆಂದರು ಬಿಡೆನೋ ||
ಕೋರೆಯ ತೋರಿಸಿ ಕೊಸರಿಕೊಂಡರು ಬಿಡೆ
ಘೋರ ರೂಪವ ತೋರಿ ಘುಡುಘುಡಿಸಲು ಬಿಡೆ
ತಿರುಕನೆಂದರು ಬಿಡೆ ತರಿದ ತಾಯ್ಕೊರಳ
ಕೊರೆಕನೆಂದರು ಬಿಡೆ ಅವನಿಯೊಳು ||
ಕರಕರೆಗಾರದೆ ಕಾಡ ಸೇರಲು ಬಿಡೆ
ಗರಳ ಮಡುವಿನಲ್ಲಿ ಧುಮುಕಿದರೂ ಬಿಡೆ
ಕಡು ಬತ್ತಲೆ ಕೈಲಿ ಕಾಸಿಲ್ಲೆಂದರು ಬಿಡೆ
ಒಡನೆ ತೇಜಿಯನೇರಿ ಓಡಲು ಬಿಡೆನೋ ||
ಒಡೆಯ ಪುರಂದರ ವಿಠಲನೇ ಎನ್ನ
ಕಡಹಾಯ್ಸುವ ಭಾರ ಕರ್ತನು ನೀನೆಂದು
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ