ಬಾಯ್ಬಡಿಕರಿಂದ ನಾನು ಬದುಕಿದೆನು ಅವರು |
ಮಾಡಿದುಪಕಾರವ ಮರೆಯೆ ಶ್ರೀ ಹರಿಯೆ
ಹಂಗಿಸಿ ಹಂಗಿಸಿ ಮನವ ಹರಿಯಲಿ ನಿಲಿಸಿದರು |
ಭಂಗಿಸಿ ಭಂಗಿಸಿ ಬಯಲಾಸೆ ಕೆಡಿಸಿದರು ||
ಕಂಗೆಡಿಸಿ ಕಂಗೆಡಿಸಿ ಕಾಮ ಕ್ರೋಧ ಬಿಡಿಸಿದರು ।
ಹಂಗಿಸಿದವರೆನ್ನ ಪರಮಬಂಧುಗಳು
ಜಾಡಿಸಿ ಜಾಡಿಸಿ ಎನ್ನ ಜನ್ಮಗಳ ಕಳೆದರು |
ಹೂಡಿಸಿ ಹೂಡಿಸಿ ಹುಟ್ಟು ಹೊಂದುಗೊಳಿಸಿದರು ॥
ಪೀಡಿಸಿ ಪೀಡಿಸಿ ಎನ್ನ ಪ್ರಯತ್ನವ ಕಳೆದರು |
ಕಾಡಿ ಕಾಡಿ ಕೈವಲ್ಯಪದವಿ ತೋರಿದರು
ಕಾಸು ಮುಟ್ಟಿದಾಗ ಕಾಯ ಪ್ರಾಯಶ್ಚಿತ್ತಕಿಕ್ಕಿದರು |
ದೂಷಿಸಿ ದೂಷಿಸಿ ನಿರ್ದೋಷ ಮಾಡಿದರು ||
ಲೇಸನು ಕೊಡು ನಮ್ಮ ಪುರಂದರ ವಿಠಲನೆ ॥
ದಾಸನೆಂದೆನಿಸುವರನುದಿನದಲಿ ಎನ್ನ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ