ಬಂದೆಯಾ ಪರಿಣಾಮದಿ ನಿನ್ನ
ಬಂಧು ಬಳಗವನೆಲ್ಲ ಬಿಟ್ಟು ಸನ್ಮಾರ್ಗದಿ
ಸಂಚಿತ ಪ್ರಾರಬ್ಧ ಕರಂಗಳನೆಲ್ಲ
ಕಿಂಚಿತು ಮಾಡಿ ಸಂಕೋಲೆಯ ಹಾಕಿ ॥
ಮಿಂಚುವ ಧನ ಪುತ್ರ ದಾರೇಷಣಂಗಳ
ವಂಚಿಸಿ ಕವಲುದಾರಿಯ ಬಿಟ್ಟು ಮಾರ್ಗದಿ
ಕಾಮವ ಖಂಡಿಸಿ ದ್ರೋಹವ ದಂಡಿಸಿ
ನಾಮರೂಪ ಕರ್ಮಂಗಳ ನಿಂದಿಸಿ |
ತಾಮಸ ಕರ್ಮ ನಡತೆಯ ತಗ್ಗಿಸಿ ನಿರ್
ನಾಮ ಮಾಡಿ ಮದ-ಮತ್ಸರಂಗಳ ನೀಗಿ
ಅಷ್ಟೈಭೋಗಂಗಳ ನಷ್ಟಂಗಳ ಮಾಡಿ
ಅಷ್ಟೆಶ್ಚರ್ಯವ ಮಟ್ಟು ಮಾಡಿ ||
ಅಷ್ಟ ಪ್ರಕೃತಿಗಳ ಕುಟ್ಟಿ ಕೆಡಹಿ ಬಹಳ
ನಷ್ಟತುಷ್ಟಿಗಳಲ್ಲಿ ದೃಷ್ಟಿಯೇ ನಿಲ್ಲದೆ
ಸ್ಥೂಲ ಸೂಕ್ಷ್ಮ ಕಾರಣ ದೇಹಂಗಳನೆಲ್ಲ
ಬೀಳುಗೆಡಹಿ ಪಂಚಭೂತಂಗಳ |
ಪಾಳು ಮಾಡಿ ಪಂಚ ಪಂಚ ಇಂದ್ರಿಯಗಳ
ಕೋಳಕೆ ತಗುಲಿಸಿ ಕೊನಬುಗಾರನಾಗಿ
ಹೊಳೆವ ಪ್ರಪಂಚದ ಬಲೆಯ ಬೀಸಿ ಸಂಗ -
ಡಲೆ ಸಾಗಿ ಬರುತಿಹ ದಾರಿಯೊಳು ||
ಒಲಿದು ಮುಕ್ತಿಯನೀವ ಪುರಂದರವಿಠಲನು
ಬಲವನಿತ್ತುದರಿಂದ ನಾನು ನೀನೆನ್ನದೆ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ