ಪರಾಕು ಮಾಡದೆ ಪರಾಮರಿಸಿ ಎನ್ನ -
ಪರಾಧಂಗಳ ಕ್ಷಮಿಸೋ
ಧರಾರಮಣ ಫಣಿಧರಾಮರಾರ್ಚಿತ
ಸುರಾಧಿಪತಿ ವಿಧಿ ಹರಾದಿ ವಂದಿತ
ನರರೊಳಗೆ ಪಾಮರನು ನಾನಿಹ -
ಪರಕೆ ಸಾಧನವರಿಯೆ ಶ್ರೀಹರಿ ॥
ಚರಣಕಮಲಕೆ ಶರಣುಹೊಕ್ಕೆನು
ಕರುಣದಿಂದ ನಿನ್ನ ಸ್ಮರಣೆಯೆನಗಿತ್ತು
ಜಪವನರಿಯೆನು ತಪವನರಿಯೆನು
ಉಪವಾಸ ವ್ರತಗಳ ನಾನರಿಯೆ ||
ಕೃಪಾವಲೋಕನದಿಂದ ಆ ಪಾಪಗಳನೆಲ್ಲ
ಅಪಹತವ ಮಾಡೋ ಅಪಾರಮಹಿಮನೇ
ಕರಿರಾಜನುದ್ಧರಿಸಿ ದ್ರೌಪದಿಯ
ಮೊರೆಯ ಲಾಲಿಸಿ ತರಳಗೊಲಿದು ನೀ
ಸಿರಿರಮಣ ನಿನ್ನ ಸರಿಯಾರ ಕಾಣೆ
ಪುರಾರಿನುತ ಸಿರಿ ಪುರಂದರ ವಿಠಲ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ