ಕೀರ್ತನೆ - 306     
 
ನೀನೇ ದಯಾಳು ನಿರ್ಮಲಚಿತ್ತ ಗೋವಿಂದ ನಿಗಮ ಗೋಚರ ಮುಕುಂದ ಜ್ಞಾನಿಗಳರಸು ನೀನಲ್ಲದೆ ಜಗಕಿನ್ನು ಮಾನದಿಂದಲಿ ಕಾವ ದೊರೆಗಳ ನಾ ಕಾಣೆ ಬಗೆಬಗೆಯಲಿ ನಿನ್ನ ಸ್ತುತಿಪೆನೊ ನಗಧರ ಖಗಪತಿವಾಹನನೆ | ಮಗುವಿನ ಮಾತೆಂದು ನಗುತ ಕೇಳುತ ನೀನು ಬೇಗದಿಂದಲಿ ಕಾಯೋ ಸಾಗರಶಯನನೆ ದಾನವಾಂತಕ ದೀನಜನಮಂದಾರನೆ ಧ್ಯಾನಿಪರ ಮನದೊಳು ಸಂಚರನೆ ॥ ಮೌನನಾದೆನು ನಿನ್ನ ಧ್ಯಾನಾನಂದದಿ ಈಗ ಸಾನುರಾಗದಿ ಕಾಯೊ ಸನಕಾದಿ ವಂದ್ಯನೆ ಮಂದರೋದ್ಧರ ಅರವಿಂದ ಲೋಚನ ನಿನ್ನ || ಕಂದನೆಂದೆನಿಸೊ ಎನ್ನ || ಸಂದೇಹವೇತಕೆ ಸ್ವಾಮಿ ಮುಕುಂದನೆ ಬಂದೆನ್ನ ಕಾಯೊ ಶ್ರೀ ಪುರಂದರ ವಿಠಲನೆ