ನೀನೇ ಅನಾಥ ಬಂಧು, ಕಾರುಣ್ಯ ಸಿಂಧು
ನೀನೇ ಅನಾಥ ಬಂಧು
ಪತಿಗಳ್ವೆವರಿದ್ದರೇನು ಸತಿಯ ಸಮಯಕ್ಕೊದಗಲಿಲ್ಲ |
ಗತಿ ನೀನೆಂದು ಮುಕುಂದನೆ ನೆನೆದರೆ
ಅತಿ ಚಮತ್ಕಾರದಿಂದೊದಗಿದೆ ಕೃಷ್ಣ
ಮದಗಜವೆಲ್ಲ ಇದ್ದರೇನು
ಅದರ ಸಮಯಕ್ಕೊದಗಲಿಲ್ಲ ||
ಮದನನಯ್ಯ ಮಧುಸೂದನನೆಂದರೆ
ಒದಗಿದೆಯೋ ತಡಮಾಡದೆ ಕೃಷ್ಣ
ಶಿಲೆಯ ಕಾಯ ಕುಲಕ್ಕೆ ತಂದೆ
ಬಲಿಯೆನ್ನದೆ ಸತ್ಪದವಿಯನಿತ್ತೆ ॥
ಇಳೆಯೊಳು ನಿನ್ನಯ ದಾಸರ ಸಲಹುವ
ಚೆಲುವ ಮೂರುತಿ ಶ್ರೀ ಪುರಂದರ ವಿಠಲ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ