ನೀನಲ್ಲದೆನಗಾರಿಲ್ಲ ಗೋವಿಂದ
ನೀನಲ್ಲದೆ ಇಹಪರವಿಲ್ಲ
ಪರರ ಬೇಡಿ ಪಂಥವಾಡಿ ಹೋಯಿತಲ್ಲ
ನರರ ಕೊಂಡಾಡಿ ನಾಲಿಗೆ ಬರಡಾಯಿತಲ್ಲ |
ಪರವಿಲ್ಲ ಇಹವಿಲ್ಲ ನರಜನ್ಮ ಸ್ಥಿರವಲ್ಲ
ನರಗೆ ಪಾಮರಗೆ ಪಾತಕದ ಪಂಜರಗೆ
ತನುವು ತನ್ನದಲ್ಲ ತನ್ನವರು ತನಗಿಲ್ಲ
ಧನಧಾನ್ಯ ಸಂಪತ್ತು ಅವಗಿರದು |
ತನುವು ಹೋಗಿ ಇನ್ನು ಮಣ್ಣು ಕೂಡುವಾಗ
ತನುಮನಕ್ಕೆ ಇನ್ನಾರಯ್ಯ ಸ್ವಾಮಿ
ಮಾತಾಪಿತರು ಗೋತ್ರಜರು ಮೊದಲಾಗಿ
ಪ್ರೀತಿಯಿಂದ ಬಹಳ ಸತಿಸುತರು |
ಕೀರ್ತಿಗೆ ಅವರು ಸ್ವಾರ್ಥಕೆ ಇವರು ಸಂ
ಗಾತಿಗಿನ್ನಾರಯ್ಯ ಪುರಂದರ ವಿಠಲ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ