ನಾಮವನೊದಗಿಸಯ್ಯ -ಶ್ರೀಹರಿ ನಿನ್ನ |
ನಾಮವನೊದಗಿಸಯ್ಯ
ನಾಮವನೊದಗಿಸಯ್ಯ ನಾನೆಂಬ ಕರ್ತೃತ್ವ ಬಿಡಿಸಿ ।
ಸಾಮಜಪೋಷಕ ನಿನ್ನ ಪಾದಸರಸಿಜಗಳಿಗೆರಗುವೆ
ಮಾತನಾಡುವಾಗ ಮಲಗುವಾಗ ನಡೆಯುವಾಗ ।
ಭೀತಿಗೊಂಡಾಗ ಎಡಹಿಬೀಳುವಾಗ |
ಸೀತಾರಾಮ ಗೋವಿಂದ ಶ್ರೀ ವೈಕುಂಠಾಧೀಶ ಅ-|
ನಾಥ ಬಾಂಧವ, ಕೃಷ್ಣ, ಕೃಷ್ಣ ಎಂದು ಕರೆವ
ತನು ತಾಳದಂಥ ಕ್ಷುಧೆ ದಾಹವಿಕಾರಗ-|
ಳನುಭವಿಸುತ ಕಂಗೆಡುವಂಥ ಸಮಯದಲ್ಲಿ ||
ವನಜನಾಭ ಗೋವಿಂದ, ವಾಣೀಪತಿಪಿತ ಕೃಷ್ಣ ।
ದನುಜಮರ್ದನ ಭಕ್ತವತ್ಸಲನೆಂದು ಕರೆವ
ಆಸಹ್ಯವಾದ ಜರೆ ರೋಗಂಗಳಾವರಿಸಿ |
ಅಸುಗಳು ಕಂಠಗತವಾಗಿ ಧೃತಿತಪ್ಪಿ ||
ವಿಷಮದೂತನ ಕೈವಶವಪ್ಪ ಸಮಯದಲ್ಲಿ |
ಬಿಸಜಾಕ್ಷ ಪುರಂದರವಿಠಲನೆಂದು ಕರೆವ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ