ಕೀರ್ತನೆ - 291     
 
ನಾನೇಕೆ ಬಡವನೊ -ನಾನೇಕೆ ಪರದೇಶಿ ನೀನಿರುವತನಕ ಹರಿಯೇ ಪುಟ್ಟಿಸಿದ ತಾಯ್ತಂದೆ ಇಷ್ಟಮಿತ್ರರು ನೀನೆ ಅಷ್ಟೆಲ್ಲ ಬಳಗ ನೀನೆ || ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ ಶ್ರೇಷ್ಠಮೂರುತಿ ಕೃಷ್ಣ ನೀನಿರುವ ತನಕ ಒಡಹುಟ್ಟಿದಣ್ಣ ನೀನೆ, ಒಡಲ ಹೊರೆವನು ನೀನೆ ಇಡು-ತೊಡುವ ವಸ್ತು ನೀನೆ || ಮಡದಿ ಮಕ್ಕಳನೆಲ್ಲ ಕಡೆಹಾಯ್ಸುವವ ನೀನೆ ಬಿಡದೆ ಸಲಹುವ ಒಡೆಯ ನೀನಿರುವ ತನಕ ವಿದ್ಯೆ ಹೇಳುವ ಗುರು ನೀನೆ ಬುದ್ಧಿ ಹೇಳುವ ಧಣಿ ನೀನೆ ಉದ್ಧಾರಕರ್ತ ನೀನೆ || ಮುದ್ದು ಶ್ರೀ ಪುರಂದರ ವಿಠಲನ ಪಾದದಲಿ ಬಿದ್ದು ಲೋಲಾಡುತಿರು ಕಾಣು ಮನವೆ