ದಾಸನ ಮಾಡಿಕೊ ಎನ್ನ – ದಿವ್ಯ
ಸಾಸಿರ ನಾಮದ ವೆಂಕಟಭೂಪರನ್ನ
ಭವಭಯ ದುಃಖವ ಬಿಡಿಸೋ- ನಿನ್ನ
ಕರುಣವಿದ್ಯೆಯನೆನ್ನ ಅಂಗಕ್ಕೆ ತೊಡಿಸೋ ॥
ಆವಾಗಲೂ ನಿನ ನಾಮ ನುಡಿಸೋ - ನಿನ್ನ
ಚರಣ ಕಮಲದಲ್ಲಿ ಆರಡಿಯೆನಿಸೊ
ಗಂಗೆಯ ಪಡೆದಂಥ ಪಾದ ವರ
ಶೃಂಗಾರ ಲಕ್ಷ್ಮಿ ಸ್ಮರಿಸುವಂಥ ಪಾದ ॥
ಬಂಗಾರ ರಂಜಿತ ಪಾದ - ಹರಿ
ಮಂಗಳ ಸದ್ಗತಿಗೆ ಚಂದಿರನಾದ
ಸೆರಗೊಡ್ಡಿ ನಾ ಬೇಡಿಕೊಂಬೆ - ನಿನ್ನ
ಹರಿವಾಣದೆಂಜಲ ನಾನು ಉಂಡೇನೆಂದೆ ||
ಬಿರುದು ನಿನ್ನದು ಹುಸಿ ಮಾಡದೆ – ನಮ್ಮ
ಪುರಂದರ ವಿಠಲ ದಯಮಾಡೊ ತಂದೆ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ