ದಾರಿ ಏನಿದಕೆ ಮುರಾರಿ ನೀ ಕೈಯ ಹಿಡಿಯದಿದ್ದರೆ-|
ದಾರಿ ಏನಿದಕೆ ಮುರಾರಿ?
ಕಷ್ಟ ಕರ್ಮಂಗಳ ಎಷ್ಟಾದರು ಮಾಳ್ಪೆ |
ಎಷ್ಟಾದರೂ ನುಡಿದೆ ಗುರುಹಿರಿಯರ
ದುಷ್ಟರ ಸಂಗವ ಬಹಳ ಮಾಡಿದರಿಂದ ।
ಶಿಷ್ಟರ ಸೇವೆಯೆಂದರಾಗದೆನಗೆ
ಪರರ ದೂಷಣೆ ಪರಪಾಪಂಗಳನೆಲ್ಲ ।
ಪರಿಪರಿಯಲ್ಲಿ ಆಡಿಕೊಂಬೆ ನಾನು ॥
ಹರಿನಾಮಾಮೃತವ ಹೇಳದೆ ಕೇಳದೆ |
ಹರಟೆಯಲ್ಲಿ ಹೊತ್ತುಗಳೆದೆ ನಾ ಹರಿಯೆ
ಪಾತಕ ಕರ್ಮಗಳ ಮಾಡಿದಜಾಮಿಳಗೆ |
ಪ್ರೀತಿಯಿಂದಲಿ ಮುಕ್ತಿ ಕೊಡಲಿಲ್ಲವೆ? ॥
ನೂತನವೇಕಿನ್ನು ಸೂರ್ಯ ಮಂಡಲ |
ರೀತಿಯಾದನು ಸಿರಿಪುರಂದರವಿಠಲ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ