ಕೀರ್ತನೆ - 280     
 
ದಯಮಾಡಿ ಸಲಹಯ್ಯ ಭಯನಿವಾರಣನೆ | ಹಯವದನ ನಾ ನಿನ್ನ ಚರಣ ನಂಬಿದೆ ಕೃಷ್ಣ ಕ್ಷಣಕ್ಷಣಕೆ ನಾ ಮಾಡಿದಂಥ ಪಾಪಗಳೆಲ್ಲ । ಎಣಿಸಲಳವಲ್ಲಷ್ಟು ಇಷ್ಟು ಎಂದು ।। ಫಣಿಶಾಹಿ ಅವಗುಣವ ನೋಡದೇ ಚರಣ ಸ್ಮ- ರಣೆಯ ಮಾಡುವಂಥ ಭಕುತಿಯನಿತ್ತು ಕಂಡ ಕಂಡ ಕಡೆಗೆ ಪೋಪ ಚಂಚಲಮನಸು ಲಂಡತನದಲಿ ಬಹಳ ಭ್ರಷ್ಟ ನಾನು ॥ ಭಂಡಾಟದವನೆಂದು ಬಹಿರಂಗಕೆಳೆಯದೆ | ಕೊಂಡಾಡುವಂಥ ಭಕುತಿಯನಿತ್ತು ಸಲಹಯ್ಯ ಜಾತಿಧರ್ಮವ ಬಿಟ್ಟು ಅಜಮಿಳನು ಇರತಿರಲು | ಪ್ರೀತಿಯಿಂದಲಿ ಮುಕುತಿಕೊಡಲಿಲ್ಲವೆ ॥ ಖ್ಯಾತಿಯನು ಕೇಳಿ ಮರೆಹೊಕ್ಕೆ ದಯಾನಿಧಿಯೆ ಬೆ | ನ್ನಾತು ಕಾಯಯ್ಯ ಶ್ರೀ ಪುರಂದರವಿಠಲ