ದಯಮಾಡೋ ದಯಮಾಡೋ ದಯಮಾಡೋ ರಂಗ
ದಯಮಾಡೋ ನಾ ನಿನ್ನ ದಾಸನೆಂತೆಂದು
ಹಲವು ಕಾಲವು ನಿನ್ನ ಹಂಬಲವೆನಗೆ
ಒಲಿದು ಪಾಲಿಸಬೇಕು ವಾರಿಜನಾಭ
ಇಹಪರದಲಿ ನೀನೆ ಇಂದಿರೆರಮಣ
ಭಯವೇಕೋ ನೀನಿರಲು ಭಕ್ತರಭಿಮಾನಿ
ಕರಿರಾಜವರದನೆ ಕಂದರ್ಪನಯ್ಯ
ಪುರಂದರವಿಠಲ ಸದ್ಗುಣ ಸಾರ್ವಭೌಮ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ