ಕೀರ್ತನೆ - 278     
 
ದಣಿಯ ನೋಡಿದೆನೋ ವೆಂಕಟನ ಮನ ದಣಿಯ ನೋಡಿದೆ ಶಿಖಾಮಣಿಯ ನಿರ್ಮಲನ ಕೇಸಕ್ಕಿ ಅನ್ನ ಉಂಬುವನ ದುಡ್ಡು ಕಾಸು ಬಿಡದೆ ಹೊನ್ನುಗಳಿಸಿಕೊಂಬುವನ ॥ ದೋಸೆ ಅನ್ನವ ಮಾರಿಸುವನ ತನ್ನ ದಾಸರ ಮೇಳದಿ ಕುಣಿದಾಡುತಿಹನ ಗಂಟಿನೊಲ್ಲಿಯ ಹೊದ್ದಿಹನ-ಹೊರ ಹೊಂಟು ಹೋಗಿ ಬೇಟೆಯಾಡುತಲಿಹನ | ಗಂಟೆ ನಾದಕೆ ಒಲಿಯುವನ ಭೂವೈ- ಕುಂಠವಿದೆಂದು ಹಸ್ತವ ತೋರಿದವನ ಬೆಟ್ಟದೊಳಗೆ ಇರುತಿಹನ ಮನ ಮುಟ್ಟಿ ಭಜಿಪ ಭಕುತರಿಗೊಲಿದವನ || ಕೊಟ್ಟ ವರವ ತಪ್ಪದವನ ಈ ಸೃಷ್ಟಿಗಧಿಕ ಪುರಂದರ ವಿಠಲನ