ಕೀರ್ತನೆ - 276     
 
ತಾರಿಸೊ ಶ್ರೀಹರಿ ತಾರಿಸೊ ತಾರಿಸೊ ಭವವ ನಿವಾರಿಸೊ ನಿನ್ನಡಿಯ ತೋರಿಸೊ ವೈಕುಂಠ ಸೇರಿಸೋ ರಂಗಯ್ಯ ಪಾಪವಿನಾಶನ ಮಾಡುವಿ ನೀ ತಾಪಸರನು ನಿತ್ಯ ಸಲಹುವಿ ॥ ವ್ಯಾಪಿಸಿ ಸರ್ವತ್ರ ನಿನ್ನವರನು ಕಾಯ್ವ ಶ್ರೀ ಪಾಂಡುರಂಗ ಪರಮಾತ್ಮ ಮುಕುಂದ ಹಿರಣ್ಯಕಶಿಪುವನು ಸೀಳಿದೆ ಅವನ ಕರುಳನು ಕೊರಳೊಳು ಹಾಕಿದೆ | ದುರುಳ ಬುದ್ಧಿಯ ತಳೆದ ದೈತ್ಯಾಧಮನ ಕೊಂದ ಕರುಣದಿಂದಲಿ ಕಂದಗೊಲಿದೆ ಗೋವಿಂದ ಅಸುರೆ ಪೂತನಿಯ ಸಂಹರಿಸಿದೆ ನೀ ಶಶಿಮುಖಿಯಭಿಮಾನ ಕಾಯ್ದೆ ॥ ಶಿಶುವಾಗಿ ಬಾಲಲೀಲೆಗಳನು ತೋರಿದೆ ಕುಸುಮನಾಭ ಶ್ರೀ ಪುರಂದರ ವಿಠಲ