ಜಯ ಪಾಂಡುರಂಗ -ನಾ ನಿನ್ನ ಮನಕೆ ಬಾರೆನೆ
ನಾ ನಿನ್ನ ಮನಕೆ ಬಾರೆನೆ ಬಂದರೆ ಈ ಭವದ
ಬಲೆಯೊಳು ಸಿಲುಕುವೆನೆ ಜಯ ಪಾಂಡುರಂಗ
ಕೆಟ್ಟ ಕಿರಾತನ ಬೆಟ್ಟದಂಥ ಪಾಪವ
ಸುಟ್ಟು ವಾಲ್ಮೀಕಿ ಮುನಿಯೆನಿಸಿದೆ
ಅಂತ್ಯಸಮಯದಲ್ಲಿ ಅತಿ ಭ್ರಷ್ಟ ಅಜಾಮಿಳಗೆ
ಅಂತಕನ ಬಾಧೆಯ ಬಿಡಿಸಿದೆಯೊ
ತಂದೆ ತಾಯ್ಸಳನು ತೊರೆದ ಧ್ರುವನಿಗೆ
ಚೆಂದದಿಂದ ಮಾರ್ಗವ ತೋರಿದೆಯೊ
ಪಂಕಜನಾಭನೆ ಕುಬುಜೆಯ ಡೊಂಕ ತಿದ್ದಿ
ಶಂಕೆಯಿಲ್ಲದೆ ವಳ ಕೂಡಿದೆಯೊ
ತೊತ್ತಿನ ಮಗನ ಮನೆಯಕುಡಿತೆಪಾಲನು ಸವಿದು
ಮತ್ತವಗೆ ಮುಕ್ತಿಯ ತೋರಿದೆಯೊ
ಐದು ಮಂದಿಯ ಕೂಡ ಸರಸವು ದ್ರೌಪದಿಗೆ
ಐದೆ ಲಜ್ಜೆಯ ಕಾಯ್ದೆಯೊ
ದೀನರನುದ್ಧರಿಪ ಪುರಂದರ ವಿಠಲ
ಏನು ಕಾರಣ ನನ್ನ ಮರೆತೆಯೊ