ಕೀರ್ತನೆ - 271     
 
ಗರುಡ ಗಮನ ಬಂದನೋ-ನೋಡಿರೊ ಬೇಗ ಗರುಡ ಗಮನ ಬಂದನೋ ಗರುಡ ಗಮನ ಬಂದ ಧರಣಿಯಿಂದೊಪ್ಪುತ ಕರೆದು ಬಾರೆನ್ನುತ ವರಗಳ ಬೀರುತ ಎನ್ನ ರಕ್ಷಿಪ ದೊರೆ ಇಲ್ಲಿಗೆ ತಾ ಬಂದ ಚಿನ್ನದೊಲ್ ಪೊಳೆವ ವಿಹಂಗ ರಥದಲಿ || ಘನ್ನ ಮಹಿಮ ಬಂಧಚ್ಛಿನ್ನ ಮೂರುತಿ ಬಂದ ಸಣ್ಣ ಕೃಷ್ಣನು ಬಂದ ಬೆಣ್ಣೆಗಳ್ಳನು ಬಂದ ಪಕ್ಷಿವಾಹನ ಬಂದ ಲಕ್ಷ್ಮೀಪತಿಯು ಬಂದ ಕುಕ್ಷಿಯೊಳೀರೇಳು ಜಗವನಿಟ್ಟವ ಬಂದ ॥ ಸೂಕ್ಷ್ಮ-ಸ್ಕೂಲದೊಳಗಿರುವನು ತಾ ಬಂದ ಸಾಕ್ಷೀಭೂತನಾದ ಸರ್ವೇಶ್ವರ ಬಂದ ತಂದೆ ಪುರಂದರ ವಿಠಲರಾಯ ಬಂದ ಬಂದು ನಿಂದು ನಲಿದಾಡುತಿಹ || ಅಂದು ಸಾಂದೀಪನ ನಂದನನ ತಂದಿತ್ತ ಸಿಂಧುಶಯನ ಆನಂದ ಮೂರುತಿ ಬಂದ