ಕೀರ್ತನೆ - 266     
 
ಕಾಯಬೇಕೆನ್ನ ಗೋಪಾಲ ಒಂದು । ಪಾಯವನರಿಯೆನು ಭಕುತರ ಪಾಲ ಹಲವು ಜನ್ಮಗಳೆತ್ತಿ ಬಂದೆ-ಮಾಯಾ-| ಮಲವೆಂಬುದರಿಯದೆ ಭವದೊಳು ನೊಂದೆ || ಬಲು ಭಯವಾಯಿತು ಮುಂದೆ-ನೀನು-| ಸುಲಭನೆಂದು ಕೇಳಿ ಶರಣೆಂದೆ ತಂದೆ ವಿತ್ತದೊಳಗೆ ಮನವಿಟ್ಟು-ನಿನ್ನ-| ಉತ್ತಮ ನಾಮದ ಸ್ಮರಣೆಯ ಬಿಟ್ಟು ॥ ಮತ್ತನಾದೆನು ಮತಿಗೆಟ್ಟು-ಇದ-| ಚಿತ್ತದಲಿ ತಿಳಿದು ಬಲು ದಯವಿಟ್ಟು ಜರುಗಿದ ಪಾಪಂಗಳೆಲ್ಲ-ಅನ್ಯ-| ನರರೇನ ಬಲ್ಲರು ಯಮಧರ್ಮ ಬಲ್ಲ || ನರಕಕೆ ಒಳಗಾದೆನಲ್ಲ-ಸಿರಿ-| ವರನಾರಾಯಣ ಪುರಂದರವಿಠಲ