ಕೀರ್ತನೆ - 264     
 
ಕರುಣಾಕರ ನೀನೆಂಬುವುದೇತಕೊ । ಭರವಸೆ ಇಲ್ಲೆನಗೆ ಕರಿ ಧ್ರುವ ಬಲಿ ಪಾಂಚಾಲಿ ಅಹಲೈಯ | ಪೊರೆದವ ಭವದಲಿ ನೀನಂತೆ || ಅರಿತು ವಿಚಾರಿಸಿ ನೋಡಲಿದೆಲ್ಲವು | ಪರಿಪರಿ ಕಂತೆಗಳಂತಿದೆ ಕೃಷ್ಣ ಕರುಣಾಕರ ನೀನಾದರೆ ಈಗಲೆ | ಕರಪಿಡಿದೆನ್ನನು ನೀ ಕಾಯೊ ॥ ಸರಸಿಜಾಕ್ಷನೇ ಅರಸು ನೀನಾದರೆ | ದುರಿತಗಳೆನ್ನನು ಪೀಡಿಪುದುಂಟೆ ಮರಣ ಕಾಲದಲಿ ಅಜಮಿಳಗೊಲಿದೆಯೊ । ಗರುಡಧ್ವಜನೆಂಬ ಬಿರುದಿನಿಂದ | ವರ ಬಿರುದುಗಳ್ಳಿನಗುಳಿಯಬೇಕಾದರೆ | ತ್ವರಿತದಿ ಕಾಯೋ ಪುರಂದರವಿಠಲ