ಕೀರ್ತನೆ - 261     
 
ಕಣ್ಣಾರೆ ಕಂಡೆನಚ್ಯುತನ-ಕಂಚಿ ಪುಣ್ಯ ಕೋಟಿ ಕರಿರಾಜವರದನ ವರಮಣಿ ಮುಕುಟಮಸ್ತಕನ ಸುರ- ವರ ಸನಕಾದಿ ವಂದಿತ ಪಾದಯುಗನ ॥ ತರುಣಿ ಲಕ್ಷ್ಮೀ ಮನೋಹರನ-ಪೀತಾಂ ಬರದುಡಿಗೆಯಲಿ ರಂಜಿಸುವ ವಿಗ್ರಹನ ಕಸ್ತೂರಿ ಪೆರೆನೊಸಲವನ ತೋರ ಮುತ್ತಿನ ಹಾರ ಪದಕವ ಧರಿಸಿದನ | ಎತ್ತಿದಭಯ ಹಸ್ತದವನ ತನ್ನ ಭಕ್ತರ ಸ್ತುತಿಗೆ ಹಾರಯಿಸಿ ಹಿಗ್ಗುವನ ನೀಲ ಮೇಘ ಶ್ಯಾಮಲನ ದೇವ ಲೋಲ ಮಕರ ಕುಂಡಲ ಧರಿಸಿಹನ | ಮೂಲೋಕದೊಳಗೆ ಚೆನ್ನಿಗನ ಕಮ ಲಾಲಯಾಪತಿ ವೈಕುಂಠವಲ್ಲಭನ ಭಾನುಕೋಟಿ ತೇಜದವನ ಭವ ಕಾನನ ರಾಶಿಗೆ ಹವ್ಯ ವಾಹನನ || ದಾನವರೆದೆಯ ತಲ್ಲಣನ ಮುನಿ ಮಾನಸ ಹಂಸನೆಂದೆನಿಸಿ ಮೆರೆವನ ತುಂಗ ಚತುರ್ಭುಜದವನ ಶುಭ ಮಂಗಳ ರೇಖೆ ಅಂಗಾಲಲೊಪ್ಪುವನ ॥ ಶೃಂಗಾರ ಹಾರ ಕಂಧರನ ದೇವ ಗಂಗೆಯ ಪಿತ ಪುರಂದರ ವಿಠಲನ